Index   ವಚನ - 352    Search  
 
ತನ್ನ ನೇಮಿಸಿ ಕಳಿವಿದಖಂಡಪರಶಿವನು ತನ್ನಿಂದೆ ತಾ ಬಂದು ನಿಂದಲ್ಲಿ, ತನತನಗೆ ಬಂದ ಬಂಧವನರಿದು ಹಿಂದುಮುಂದರಿಯದೆ ಚಂದಚಂದದಲಿ ಅರ್ಪಿಸಿಕೊಂಡು ಸುಖಿಸುವನಲ್ಲದೆ, ಒಂದನರಿಯದೆ ಸಂದವರೆಂದು, ಬಂದ ಬಂದ ಪದಾರ್ಥವನು, ಸಂಧಿ ಸಂಧಿಸಿ ಕೊಟ್ಟು ಕೊಂಡು, ಬೆಂದುಹೋಗುವ ಮಂದಮತಿಯಂತಲ್ಲ ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಪ್ರಸಾದಿ.