Index   ವಚನ - 353    Search  
 
ಮರೆದು ಕೊಟ್ಟು ಕೊಂಡರೆ ಸುಖವಾಯಿತ್ತು ಲಿಂಗಕ್ಕೆ. ಹರಿದು ಕೊಟ್ಟು ಕೊಂಡರೆ ಪರಿಣಾಮವಾಯಿತ್ತು ಜಂಗಮಕ್ಕೆ. ತೊರೆದು ಕೊಟ್ಟು ಕೊಂಡರೆ ಆನಂದವಾಯಿತ್ತು ಗುರುನಿರಂಜನ ಚನ್ನಬಸವಲಿಂಗಕ್ಕೆ ಪ್ರಸಾದಿಯಮುಖದಿಂದೆ.