ನಿಚ್ಚನಿರ್ಮಲ ಅಚ್ಚಪದಾರ್ಥವನು
ಸಚ್ಚಿದಾನಂದಲಿಂಗಸನ್ನಿಹಿತ
ಸುಖಾನಂದಮಯ ಅವಿರಳಪ್ರಸಾದಿ
ಅರ್ಪಿಸಿ ಕೊಂಬ ದ್ವೈತಸುಖಿಯಲ್ಲ,
ಅರ್ಪಿಸದೆ ಕೊಂಬ ಅದ್ವೈತಸುಖಿಯಲ್ಲ,
ಅರ್ಪಿಸದೆ ಅರ್ಪಿಸಿ ಕೊಂಬ ನಿತ್ಯ ಪರಿಣಾಮಿ
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Niccanirmala accapadārthavanu
saccidānandaliṅgasannihita
sukhānandamaya aviraḷaprasādi
arpisi komba dvaitasukhiyalla,
arpisade komba advaitasukhiyalla,
arpisade arpisi komba nitya pariṇāmi
guruniran̄jana cannabasavaliṅgadalli.