Index   ವಚನ - 359    Search  
 
ಪ್ರಸಾದಿ ಪ್ರಸಾದಿಗಳೆಂಬ ಕಸಮಲಯುಕ್ತರನೇನೆಂಬೆನಯ್ಯಾ! ಹಸಿವಿನಿಚ್ಛೆಗೆ ಹರಿದಾಡಿ ಅಸುವಿನ ಪ್ರಕಾಶದಲ್ಲಿ ಅನುಗೆಟ್ಟು ತಿಂಬುವ ಅಬದ್ಧ[ರು] ಪರಮಪ್ರಸಾದಿಗಳಹರೆ? ಅಂಗದ ಮುಖವ ಲಿಂಗವರಿಯದು, ಲಿಂಗದ ಮುಖವ ಅಂಗವರಿಯದು. ಕಂಗಳು ಕೆಟ್ಟು ಕಲ್ಪಿಸಿಕೊಂಬ ಭಂಗಭವಿಗಳು ಲಿಂಗಪ್ರಸಾದಿಗಳಹರೆ? ಹುಟ್ಟು ಹೊಂದಿದ ಕಷ್ಟ ಕಳೆಯದೆ, ಹರಟೆಯೆತ್ತಿ ಹೊಟ್ಟೆಹೊರವ ಭ್ರಷ್ಟಮಾನವರು ಶ್ರೇಷ್ಠಪ್ರಸಾದಿಗಳಹರೆ ಗುರುನಿರಂಜನ ಚನ್ನಬಸವಲಿಂಗಾ?