ಗುರುಪ್ರಸಾದಿಯೆನಿಸಿಕೊಂಡಬಳಿಕ
ತನ್ನ ಕಾಯವನುಪಚಾರದನುಕೂಲಿಗಲಸಿದರೆ
ಆ ಕಾಯ ಮಾಯೋಚ್ಛಿಷ್ಟ.
ಲಿಂಗಪ್ರಸಾದಿಯೆನಿಸಿಕೊಂಡಬಳಿಕ
ತನ್ನ ಕರಣವ ಮಂತ್ರಧ್ಯಾನ
ಜಪಸ್ತೋತ್ರೋಪಚಾರದನುಕೂಲಿಗಲಸಿದರೆ
ಆ ಕರಣ ಮಾಯೋಚ್ಛಿಷ್ಟ.
ಜಂಗಮಪ್ರಸಾದಿಯೆನಿಸಿಕೊಂಡಬಳಿಕ
ತನ್ನಾತ್ಮವನು ದಾಸೋಹದುಪಚಾರದನುಕೂಲಿಗಲಸಿದರೆ
ಆ ಆತ್ಮನು ಮಾಯೋಚ್ಛಿಷ್ಟ.
ಇಂತು ತ್ರಿವಿಧ ಪ್ರಸಾದಿಗಳೆನಿಸಿಕೊಂಡಬಳಿಕ
ತ್ರಿವಿಧಕ್ಕನುಕೂಲಿಯಾಗದಿರ್ದಡೆ ತ್ರಿವಿಧೋಚ್ಛಿಷ್ಟ.
ತ್ರಿವಿಧೋಚ್ಛಿಷ್ಟವಾದ ಜೀವನಿಗೆ
ನಾಯಕ ನರಕ ತಪ್ಪದು ಕಾಣಾ
ಗುರುನಿರಂಜನ ಚನ್ನ ಬಸವಲಿಂಗಾ.
Art
Manuscript
Music
Courtesy:
Transliteration
Guruprasādiyenisikoṇḍabaḷika
tanna kāyavanupacāradanukūligalasidare
ā kāya māyōcchiṣṭa.
Liṅgaprasādiyenisikoṇḍabaḷika
tanna karaṇava mantradhyāna
japastōtrōpacāradanukūligalasidare
ā karaṇa māyōcchiṣṭa.
Jaṅgamaprasādiyenisikoṇḍabaḷika
tannātmavanu dāsōhadupacāradanukūligalasidare
ā ātmanu māyōcchiṣṭa.
Intu trividha prasādigaḷenisikoṇḍabaḷika
trividhakkanukūliyāgadirdaḍe trividhōcchiṣṭa.
Trividhōcchiṣṭavāda jīvanige
nāyaka naraka tappadu kāṇā
guruniran̄jana canna basavaliṅgā.