Index   ವಚನ - 381    Search  
 
ಕಾಲಿಲ್ಲದ ಗುರು ಕಣ್ಣಿಲ್ಲದ ಕಂದಗೆ ಬಣ್ಣವಿಲ್ಲದ ತಲೆಯ ತೋರಿದರೆ ಕೈಯಿಲ್ಲದೆ ಹಿಡಿದು ಕರ್ಮವಿಲ್ಲದ ಕಾಯದ ಮೇಲೆ ಮಡಗಿದರೆ ಹೊರಗೊಳಗೆ ಸುಳಿವುದೈ. ಆ ಸುಳಿಹಿನ ಬೆಳಗಿನೊಳಗೆ ಕಳೆಯುಳ್ಳ ಪುರುಷನ ಪುತ್ಥಳಿಯ ಕಂಡೆನೈ. ಆ ಪುತ್ಥಳಿಗೆ ಸಕಲವ ಕೊಟ್ಟು ನಿಃಕಲವ ನಿಲಿಸಿ ನಿರಂಜನವನಿತ್ತಡೆ ಎತ್ತಿಕೊಂಡಿತ್ತ ತನ್ನ ಗುರುನಿರಂಜನ ಚನ್ನಬಸವಲಿಂಗ ಪ್ರಸಾದಿಗೆ.