ಎಚ್ಚರವಿರಲೆಂದು ನಿಶ್ಚಯಿಸಿದಿಷ್ಟ,
ಅಷ್ಟವಾಗಿ ಅಂಗಮನಪ್ರಾಣಭಾವಂಗಳಿಗೆ
ಗೋಚರವಾಗಿರಲು,
ಅನ್ಯವ ನೆಚ್ಚಿ ನಾನು ಕೆಟ್ಟೆನಯ್ಯಾ ದಿಟವಾಗಿ.
ಚಂದ್ರ ಸೂರ್ಯಮಾರ್ಗವಿಡಿದು
ಕಟುಕರೊಳಗಿರ್ದ ಸೈತಾನಸೌಖ್ಯವೇದಿ,
ಸಗುಣ ನಿರ್ಗುಣ ನಿರಾವಯವರಿದು ನಿವೇದಿಸಿಕೊಂಬ
ನಿಜಪ್ರಸಾದಿಯ ದರ್ಶನ ಸ್ಪರ್ಶನ ಸಂಭಾಷಣೆಯೆಂಬ
ಘನಪ್ರಸಾದವ ಕರುಣಿಸಯ್ಯಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Eccaraviralendu niścayisidiṣṭa,
aṣṭavāgi aṅgamanaprāṇabhāvaṅgaḷige
gōcaravāgiralu,
an'yava necci nānu keṭṭenayyā diṭavāgi.
Candra sūryamārgaviḍidu
kaṭukaroḷagirda saitānasaukhyavēdi,
saguṇa nirguṇa nirāvayavaridu nivēdisikomba
nijaprasādiya darśana sparśana sambhāṣaṇeyemba
ghanaprasādava karuṇisayyā
guruniran̄jana cannabasavaliṅgā.