Index   ವಚನ - 394    Search  
 
ಸುಜ್ಞಾನಸತ್ಕ್ರಿಯಾನುಭಾವ ಗುರುಲಿಂಗಜಂಗಮವೆನ್ನ ಅಂಗ ಮನ ಪ್ರಾಣವೆಂದರಿದು, ಕಸಗಳೆದು ವಿಷಯ ಪದಾರ್ಥವನು, ಸುಶೀಲ ಸಾವಧಾನದಿಂದರ್ಪಿಸಿ ಅಸಮಪ್ರಸಾದವಕೊಂಡು, ಪರಮಾನಂದಸುಖಿಮುಖಿಯಾಗಿರ್ದೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.