Index   ವಚನ - 395    Search  
 
ಬೇರಿಲ್ಲದ ವೃಕ್ಷಕ್ಕೆ ಹಾರಲಿಲ್ಲದ ಪಕ್ಷಿ ಸಾರಿರ್ದ ಸಂಬಂಧವ ನೋಡಾ! ನೀರಿಲ್ಲದೆ ಪಸರಿಸಿ ಗಂಧವಿಲ್ಲದ ಕುಸುಮದಿಂದಾದ ಸಾರವಿಲ್ಲದ ಹಣ್ಣ ಸೇವಿಸುವದು ನೋಡಾ. ಊರಿಲ್ಲದ ಹಾರುವ ಬೇರಿಲ್ಲದ ಉಂಗುಷ್ಠದಿಂದೆ ತೋರಿ ತೋರಿಕೊಂಡು ಸುಖಿಸಿದ ಗುರುನಿರಂಜನ ಚನ್ನಬಸವಲಿಂಗದಲ್ಲಿ.