ಬೇರಿಲ್ಲದ ವೃಕ್ಷಕ್ಕೆ ಹಾರಲಿಲ್ಲದ
ಪಕ್ಷಿ ಸಾರಿರ್ದ ಸಂಬಂಧವ ನೋಡಾ!
ನೀರಿಲ್ಲದೆ ಪಸರಿಸಿ ಗಂಧವಿಲ್ಲದ ಕುಸುಮದಿಂದಾದ
ಸಾರವಿಲ್ಲದ ಹಣ್ಣ ಸೇವಿಸುವದು ನೋಡಾ.
ಊರಿಲ್ಲದ ಹಾರುವ ಬೇರಿಲ್ಲದ ಉಂಗುಷ್ಠದಿಂದೆ
ತೋರಿ ತೋರಿಕೊಂಡು ಸುಖಿಸಿದ
ಗುರುನಿರಂಜನ ಚನ್ನಬಸವಲಿಂಗದಲ್ಲಿ.
Art
Manuscript
Music
Courtesy:
Transliteration
Bērillada vr̥kṣakke hāralillada
pakṣi sārirda sambandhava nōḍā!
Nīrillade pasarisi gandhavillada kusumadindāda
sāravillada haṇṇa sēvisuvadu nōḍā.
Ūrillada hāruva bērillada uṅguṣṭhadinde
tōri tōrikoṇḍu sukhisida
guruniran̄jana cannabasavaliṅgadalli.