Index   ವಚನ - 397    Search  
 
ಕಾಯದ ಕೈಗಳರಿಯವು ಗುರುಲಿಂಗಜಂಗಮಕ್ಕರ್ಪಿತವನುಳಿದು ಕರ್ಮದ ಕಾಳಿಕೆಯ. ಕರಣದ ಕೈಗಳರಿಯವು ಲಿಂಗಜಂಗಮಗುರುವಿಂಗರ್ಪಿತವನುಳಿದು ಸಂಸ್ಕೃತಿಯ ಸಂಕಲ್ಪದ ಸುಳುಹ. ಭಾವದ ಕೈಗಳರಿಯವು ಜಂಗಮಗುರುಲಿಂಗದರ್ಪಿತವನುಳಿದು ಜ್ಞಾನವಿಕೃತಿಭಾವ ವರ್ತನವಿಕೃತಿಭಾವಮೋಹದ ವಿಕೃತಿಭಾವಂಗಳೆಂಬ ವಿಷಮವ. ಸರ್ವಾಂಗದ ಕೈಗಳರಿಯವು ಗುರುನಿರಂಜನ ಚನ್ನಬಸವಲಿಂಗದರ್ಪಿತವನುಳಿದು ಇತರ.