ನಿಮ್ಮರ್ಪಿತದನುವಿಂಗಲ್ಲದೆ
ಎನ್ನ ಕಾಲುಗಳು ಮುಂದಕ್ಕೆ ಹರಿಯವು.
ನಿಮ್ಮರ್ಪಿತದವಸರಕ್ಕಲ್ಲದೆ ಎನ್ನ ಕೈಗಳು [ಪಿಡಿ]ಯವು.
ನಿಮ್ಮರ್ಪಿತದ ಕುರುಹಿಂಗಲ್ಲದೆ ಎನ್ನ ತನುವು ಅಲಸದು.
ನಿಮ್ಮರ್ಪಿತದ ಬರುವಿಂಗಲ್ಲದೆ ಎನ್ನ ನುಡಿ ಅನುಕರಿಸದು.
ನಿಮ್ಮರ್ಪಿತದ ಸುಳುಹಿಂಗಲ್ಲದೆ ಎನ್ನ ಕಂಗಳು ಸೂಸವು.
ನಿಮ್ಮರ್ಪಿತದ ಕೇಳಿಗಲ್ಲದೆ ಎನ್ನ ಕರ್ಣಂಗಳೊಲಿದು ಲಾಲಿಸವು.
ನಿಮ್ಮರ್ಪಿತದ ಸುಖಕ್ಕಲ್ಲದೆ ಎನ್ನಾತ್ಮ ಪರಿಣಾಮಿಸದು
ಗುರುನಿರಂಜನ ಚನ್ನಬಸವಲಿಂಗವಾದ ಕಾರಣ.
Art
Manuscript
Music
Courtesy:
Transliteration
Nim'marpitadanuviṅgallade
enna kālugaḷu mundakke hariyavu.
Nim'marpitadavasarakkallade enna kaigaḷu [piḍi]yavu.
Nim'marpitada kuruhiṅgallade enna tanuvu alasadu.
Nim'marpitada baruviṅgallade enna nuḍi anukarisadu.
Nim'marpitada suḷuhiṅgallade enna kaṅgaḷu sūsavu.
Nim'marpitada kēḷigallade enna karṇaṅgaḷolidu lālisavu.
Nim'marpitada sukhakkallade ennātma pariṇāmisadu
guruniran̄jana cannabasavaliṅgavāda kāraṇa.