Index   ವಚನ - 398    Search  
 
ನಿಮ್ಮರ್ಪಿತದನುವಿಂಗಲ್ಲದೆ ಎನ್ನ ಕಾಲುಗಳು ಮುಂದಕ್ಕೆ ಹರಿಯವು. ನಿಮ್ಮರ್ಪಿತದವಸರಕ್ಕಲ್ಲದೆ ಎನ್ನ ಕೈಗಳು [ಪಿಡಿ]ಯವು. ನಿಮ್ಮರ್ಪಿತದ ಕುರುಹಿಂಗಲ್ಲದೆ ಎನ್ನ ತನುವು ಅಲಸದು. ನಿಮ್ಮರ್ಪಿತದ ಬರುವಿಂಗಲ್ಲದೆ ಎನ್ನ ನುಡಿ ಅನುಕರಿಸದು. ನಿಮ್ಮರ್ಪಿತದ ಸುಳುಹಿಂಗಲ್ಲದೆ ಎನ್ನ ಕಂಗಳು ಸೂಸವು. ನಿಮ್ಮರ್ಪಿತದ ಕೇಳಿಗಲ್ಲದೆ ಎನ್ನ ಕರ್ಣಂಗಳೊಲಿದು ಲಾಲಿಸವು. ನಿಮ್ಮರ್ಪಿತದ ಸುಖಕ್ಕಲ್ಲದೆ ಎನ್ನಾತ್ಮ ಪರಿಣಾಮಿಸದು ಗುರುನಿರಂಜನ ಚನ್ನಬಸವಲಿಂಗವಾದ ಕಾರಣ.