Index   ವಚನ - 399    Search  
 
ಪ್ರಸಾದಿಯ ಕಾಯವೆಲ್ಲ ಅಷ್ಟಾವರಣ ಪ್ರಕಾಶಮಯವಾಗಿ ತೋರುವದಲ್ಲದೆ ಪ್ರಕೃತಿಮಯತೋರದು ನೋಡಾ. ಪ್ರಸಾದಿಯ ಮನವೆಲ್ಲ ಚತುರ್ವಿಧಭಕ್ತಿಪ್ರಕಾಶಮಯವಾಗಿ ತೋರುವದಲ್ಲದೆ ಪ್ರಕೃತಿಮಯತೋರದು ನೋಡಾ. ಪ್ರಸಾದಿಯ ಭಾವವೆಲ್ಲ ಮಹಾನುಭಾವಪ್ರಕಾಶಮಯವಾಗಿ ತೋರುವದಲ್ಲದೆ ಪ್ರಕೃತಿಮಯತೋರದು ನೋಡಾ. ಪ್ರಸಾದಿಯು ನಿರಂತರ ಗುರುನಿರಂಜನ ಚನ್ನಬಸವಲಿಂಗ ತಾನಾಗಿ ತೋರುವನಲ್ಲದೆ ಪ್ರಕೃತಿಮಯ ತೋರದು ನೋಡಾ.