ಕರಣತ್ರಯದಪ್ಪುಗೆಯ ಪರಿಹರಿಸದೆ ಮರಣವ ಗೆದ್ದೆವೆಂಬ
ಬರುನುಡಿಯ ಕಂಗುರುಡರನೇನೆಂಬೆನಯ್ಯಾ?
ತ್ರಿವಿಧಭಕ್ತಿಯನರಿಯದೆ ತ್ರಿವಿಧಮಲಸಂಬಂಧವಾಗಿ
ತ್ರಿಕೂಟವ ಕಂಡವರೆಂದು ಕೂಗಿದರೆ
ಗೂಗೆ ಕಾಗೆಯ ಕೂಗಿನಂತೆ
ಸೊಗಸದಯ್ಯಾ.
ನಿಮ್ಮ ಶರಣರಿಗೆ ಕೊಡುಕೊಳ್ಳಿಯುಳ್ಳರೆ ಭವ ತಪ್ಪದೆಂದು
ನುಡಿದುಂಡು ನಡೆಗೆಟ್ಟು ಹೋಗುವ ತುಡುಗುಣಿಗಳ
ಕೆಡಹಿ ಮೂಗಕೊಯ್ವ ಗುರುನಿರಂಜನ ಚನ್ನಬಸವಲಿಂಗ.
Art
Manuscript
Music
Courtesy:
Transliteration
Karaṇatrayadappugeya pariharisade maraṇava geddevemba
barunuḍiya kaṅguruḍaranēnembenayyā?
Trividhabhaktiyanariyade trividhamalasambandhavāgi
trikūṭava kaṇḍavarendu kūgidare
gūge kāgeya kūginante
sogasadayyā.
Nim'ma śaraṇarige koḍukoḷḷiyuḷḷare bhava tappadendu
nuḍiduṇḍu naḍegeṭṭu hōguva tuḍuguṇigaḷa
keḍahi mūgakoyva guruniran̄jana cannabasavaliṅga.
ಸ್ಥಲ -
ಪ್ರಸಾದಿಯ ಮಾಹೇಶ್ವರಸ್ಥಲ