Index   ವಚನ - 414    Search  
 
ನೋಡಬಂದ ನಲ್ಲಂಗೆ ಕೂಡಿ ಮಾಡಿದ ಶುದ್ಧಪ್ರಸಾದಿ. ಆಡಬಂದ ನಲ್ಲಂಗೆ ಕೂಡಿ ನೀಡಿದ ಸಿದ್ಧಪ್ರಸಾದಿ. ಕೂಡಬಂದ ನಲ್ಲಂಗೆ ಕೂಡಿ ಕೂಡಿದ ಪ್ರಸಿದ್ಧಪ್ರಸಾದಿ. ನೋಟ ಆಟ ಕೂಟದ ಕುಳವನರಿಯದೆ ಬೇಟಕ್ಕೊಳಗಾದರು ಗುರುನಿರಂಜನ ಚನ್ನಬಸವಲಿಂಗ.