ಹೆರೆಹಿಂಗದಾಚಾರ ಅಂಗವೇದಿಯಾಗಿ,
ಇತರ ಸಂಗಸಂಯೋಗದತಿಶಯವನಳಿದು
ನಿರತಿಶಯ ನಿಜಾನಂದಮಹಿಮನು ನೋಡಾ.
ಕರಣವೃತ್ತಿ ಚರಣವ ಕೊಯ್ದು
ಅರಿದರ್ಪಿತಮುಖಿ ಅನುಭಾವಿ ನೋಡಾ.
ಶಿವಾಣತಿವಿಡಿದು ಸತ್ತುಚಿತ್ತಾನಂದ ನಿತ್ಯದಾಸೋಹಿಯಾಗಿರ್ದ
ಗುರುನಿರಂಜನ ಚನ್ನಬಸವಲಿಂಗದಲ್ಲಿ ನೋಡಾ.
Art
Manuscript
Music
Courtesy:
Transliteration
Herehiṅgadācāra aṅgavēdiyāgi,
itara saṅgasanyōgadatiśayavanaḷidu
niratiśaya nijānandamahimanu nōḍā.
Karaṇavr̥tti caraṇava koydu
aridarpitamukhi anubhāvi nōḍā.
Śivāṇativiḍidu sattucittānanda nityadāsōhiyāgirda
guruniran̄jana cannabasavaliṅgadalli nōḍā.
ಸ್ಥಲ -
ಪ್ರಸಾದಿಯ ಮಾಹೇಶ್ವರಸ್ಥಲ