Index   ವಚನ - 426    Search  
 
ಅಗಮ್ಯ ಅವಿರಳ ಗುರುವಿನತಿಶಯ ದೀಕ್ಷಾತ್ರಯದಿಂದೆನ್ನಂಗ ಪ್ರಾಣ ಭಾವಂಗಳಲ್ಲಿ ಗುರು ಲಿಂಗ ಜಂಗಮ ಪ್ರಸಾದಬೆಳಗು ಪ್ರಜ್ವಲಿಸುತ್ತಿಹುದು. ಭಿನ್ನ ಭಕ್ತಿಯನರಿತು, ಅಭಿನ್ನ ಭಕ್ತಿ ಆವರಿಸಿತ್ತು. ಪ್ರಾಣಲಿಂಗತ್ವ ಲಿಂಗಪ್ರಾಣತ್ವ ಪ್ರಸಾದಮುಕ್ತತ್ವವೆಂಬ ಸಂಪತ್ತಿನ ಸಾರಾಯಪ್ರಭೆಯೊಳೊಪ್ಪುತಿರ್ದೆನು ಗುರುನಿರಂಜನ ಚನ್ನಬಸವಲಿಂಗಸನ್ನಿಹಿತವಾಗಿ.