Index   ವಚನ - 427    Search  
 
ಅಖಂಡಲಿಂಗವೆನ್ನ ಕರಪೀಠದಲ್ಲಿ ಬೆಳಗ ಬೀರುತಿರ್ದನು. ಆ ಬೆಳಗಿನೊಳು ನಿಂದು ಒಳಗರಿದು, ಇಳೆ ಜಲಾಗ್ನಿ ಮರುತಾಂಬರ ಬೆಳೆ ಕಳೆಯ ಪಾಕ ನಿವೇದಿಸಿಕೊಂಡು, ನಿರಂತರಪರಿಣಾಮಿ ನಾನು ಗುರುನಿರಂಜನ ಚನ್ನಬಸವಲಿಂಗದಲ್ಲಿ.