Index   ವಚನ - 429    Search  
 
ಆಚಾರ ಗುರು ಶಿವ ಜಂಗಮ ಶೇಷ ಮಹಾ ಇಷ್ಟ ಪ್ರಾಣ ಭಾವಲಿಂಗ ಬೆಳಗಿನೊಳು ಬೆಳಗುತಿರ್ದ ಘನಮಹಾಪ್ರಸಾದಿಯ ನಡೆಯ ಬಲ್ಲವರಾರು? ನುಡಿಯ ಬಲ್ಲವರಾರು? ಹಿಡಿಯಬಲ್ಲವರಾರು? ಕೊಡಬಲ್ಲವರಾರು? ಕೊಳ್ಳಬಲ್ಲವರಾರು? ಗುರುನಿರಂಜನ ಚನ್ನಬಸವಲಿಂಗದಂಗವಾದ ಇರವ ಬಲ್ಲವರಾರು?