Index   ವಚನ - 441    Search  
 
ನಾದಸುಖವಿಡಿದು ಸಾಧಿಸಿ ಮಾಡಿಕೊಂಡವನಲ್ಲ ಶರಣ. ಬಿಂದುವಿನಲ್ಲಿ ಸುಖವಿಡಿದು ಸಂಕೋಚಿಸಿ ಮಾಡಿಕೊಂಡವನಲ್ಲ ಶರಣ. ಕಳೆಯ ಸುಖವಿಡಿದು ಕಂಡು ಕಂಡು ಮಾಡಿಕೊಂಡವನಲ್ಲ ಶರಣ. ವೃಷಿಕಂಗಳ ಸುಖವಿಡಿದು ಮಾಟದಲ್ಲಿ ನಿಂತು ಮಾಡಿಕೊಂಡವನಲ್ಲ ಶರಣ. ಗುರುನಿರಂಜನ ಚನ್ನಬಸವಲಿಂಗದಂಗ ಸುಖಿಯಾಗಿರ್ದ ಪ್ರಸಾದಿ ಶರಣ.