Index   ವಚನ - 453    Search  
 
ಅವಿರಳಾನಂದಮುಖದಿಂದೊಗೆದು ಬಂದ ನಿಲುವಿಂಗೆ ಹಲವು ಪ್ರಕಾರ ಹುಸಿಮುಸುಕಿ, ಆ ಕಾಲಕ್ಕರಿದು ಬೆರಗುವಟ್ಟಲ್ಲಿ ಪರಿವಿಡಿಯಿಂದೆ ಬಂದು ನೋಡುತ್ತ ಮುಟ್ಟುತ್ತ ಹೇಳುತ್ತ ಕೊಟ್ಟುಯಿಟ್ಟಲ್ಲಿ, ಬಟ್ಟೆಗಳ ಕಂಡೆನಲ್ಲ ದಿಟ್ಟರನರಿದೆನಲ್ಲ. ಅತ್ತಿತ್ತರಿಯದೆ ನಿರ್ಮಲತನುಮನಭಾವವನರಿದಲ್ಲಿ ಮತ್ತೇನು ಕೊಡು ಕೊಳ್ಳಿ ಕಾಣಲಿಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ ಪ್ರಸಾದಿಯ ಪ್ರಸಾದ.