Index   ವಚನ - 454    Search  
 
ಅಂಗ-ಲಿಂಗ, ಶಕ್ತಿ-ಭಕ್ತಿ, ಹಸ್ತ-ಮುಖ, ಪದಾರ್ಥ-ಪ್ರಸಾದವೆಂಬ ಅಷ್ಟ ವಿಧ ಸಕೀಲನರಿದು, ಎನ್ನ ಸ್ಥೂಲತತ್ವದೊಳಗಣ ಸಕಲನಿಃಕಲ ನಿರಂಜನವನು ಸತ್ತುಸ್ವರೂಪಕ್ಕಿತ್ತು ಶುದ್ಧವಾಗಿ ಮರೆದೆನಯ್ಯಾ, ಎನ್ನ ಸೂಕ್ಷ್ಮ ತತ್ವದೊಳಗಣ ಸಕಲನಿಃಕಲ ನಿರಂಜನವನು ಚಿತ್ಸ್ವರೂಪಕ್ಕಿತ್ತು. ಸಿದ್ಧವಾಗಿ ಮರೆದೆನಯ್ಯಾ. ಎನ್ನ ಕಾರಣತತ್ವದೊಳಗಣ ಸಕಲನಿಃಕಲ ನಿರಂಜನವನು ಆನಂದಸ್ವರೂಪಕ್ಕಿತ್ತು ಪ್ರಸಿದ್ಧವಾಗಿ ಮರೆದೆನಯ್ಯಾ. ಗುರುನಿರಂಜನ ಚನ್ನಬಸವಲಿಂಗ ಪ್ರಸಾದದೊಳಡಗಿ ನಾನು ಪ್ರಸಾದಿಯೆಂಬುದನರಿಯೆನಯ್ಯಾ.