Index   ವಚನ - 461    Search  
 
ಅತ್ತಿತ್ತಲುಕದೆ ನೆತ್ತಿಯೊಳಗುಸಿರು ಸುತ್ತಿ ಕಣ್ಣ ಸಿಕ್ಕಿಸಿ ಕಂಡೆವೆಂಬ ಭಿನ್ನಭಾವಿಗಳರಿವಿಂಗೆ, ಚನ್ನಷಟ್‍ಸ್ಥಲ ಕ್ರಿಯಾಸುಜ್ಞಾನ ಸುವಿಲಾಸ ಸುಪ್ರಭಾಲಿಂಗವು ಸ್ವಪ್ನದಲ್ಲಿ ಸುಳಿಯದು ಕಾಣಾ, ಗುರುನಿರಂಜನ ಚನ್ನಬಸವಲಿಂಗಾ.