Index   ವಚನ - 462    Search  
 
ಕಷ್ಟಯೋಗಿಗಳ ಕರ್ಮವ ನೋಡಬಾರದು ಕಾಣಾ. ಅಷ್ಟಾಂಗಯೋಗವಿಡಿದು ಅನ್ನುದಕವ ತೊರೆದು, ಆಯಾಸಬಟ್ಟು ಅಭಿನ್ನ ವಸ್ತುವನು ಭಿನ್ನವಿಟ್ಟು, ಕಂಡು ಕೂಡಿ ಮುಕ್ತಿಯ ಹಡೆಯಬೇಕೆಂದು, ಕಣ್ಣ ಕಳಕೊಂಡು ಕಾಂತಾರ ಬಿದ್ದು ಹೋಗುವ ಭ್ರಾಂತಬಾಲಕರು ಎಂತು ಮುಕ್ತಿಯ ಹಡೆವರಯ್ಯಾ ಗುರುನಿರಂಜನ ಚನ್ನಬಸವಲಿಂಗಾ?