Index   ವಚನ - 470    Search  
 
ಆತ್ಮನು ಪರಮಾತ್ಮನುಯೆಂದು ಭಾವಿಸುವ ಭಾವ ಬಂಧನದಲ್ಲಿಪ್ಪ ಬರಿಜ್ಞಾನಿಗಳಿಗಳವಲ್ಲ. ನಿಜಾನುಭಾವದ ನಿಲವು ಕತ್ತಲೆ ಬೆಳಗಿದ ಕಳೆಯೊಳೊಂದಿ ನಿತ್ಯದ ನಿಜವನರಿದಿಹೆನೆಂಬ ಮಿಥ್ಯಮನನೀಯ ಕೊನೆಗೆ ನಿಲುಕದು, ಸತ್ಯಜ್ಞಾನಾನುಭಾವದ ಬೆಳಗು. ದಶಮಾರುತನ ಸುಳುಹ ತಪ್ಪಿ ಸುಳಿಯಲರಿಯದಿರ್ದಡೆ, ಪ್ರಾಣಲಿಂಗದ ಸಮರಸಾನುಭಾವಸಂಬಂಧಿ ಸದ್ಗುರು ನಿರಂಜನ ಚನ್ನಬಸವಲಿಂಗದಲ್ಲಿ.