Index   ವಚನ - 471    Search  
 
ಆರು ಕಮಲದ ಶತಪತ್ರದ ತ್ರಿದಳದೊಂದೆಸಳದ ಅವಿರಳಾಲಯದಿಂದೆಸವ ಪರಬ್ರಹ್ಮವು ಕ್ರಿಯಾಜ್ಞಾನ ಭಾವಾಚರಣೆಗೆ ಕೂರ್ತು ಕರಸ್ಥಲಕ್ಕೆ ಬಂದಬಳಿಕ ಕಣ್ಮನ ಭಾವ ತುಂಬಿ ಪ್ರಾಣವೇದಿಯಾಗಿರಬೇಕಲ್ಲದೆ ದ್ವೈತಾದ್ವೈತ ಯೋಗಮಾರ್ಗವಿಡಿದು ಬ್ರಹ್ಮರಂಧ್ರದಲ್ಲಿಪ್ಪ ಚಿತ್ಕಳೆಯ ಕಂಡು ಕೂಡಿ ಮುಕ್ತನಾಗಬೇಕೆಂಬ ಪಶುಪ್ರಕೃತಿಗಳನೇನೆಂಬೆನಯ್ಯಾ ಗುರುನಿರಂಜನ ಚನ್ನಬಸವಲಿಂಗಾ.