Index   ವಚನ - 474    Search  
 
ಆರಾರರಿಂದೆ ಮೀರಿದ ಅಪ್ರತಿಮಲಿಂಗವ ಆರಿಸಿಕೊಂಡ ಬಳಿಕ ಅರಿದರಿದಾಚರಿಸಲರಿಯದೆ, ಪುರಾಣವಾಕ್ಯವನರಿದು ಕಾಂಬುವೆನೆಂದು ಸತ್ಕ್ರಿಯಾ ಸುಜ್ಞಾನ ಬಾಹ್ಯನಾಗಿ, ಯಮ ನಿಯಮಾಸನ ಪ್ರಾಣಾಯಾಮ ಪ್ರತ್ಯಾಹಾರ ಧ್ಯಾನ ಧಾರಣ ಸಮಾಧಿಗಳೆಂಬ ಅಷ್ಟಾಂಗಯೋಗಾಭ್ಯಾಸದಿಂದ ಕಷ್ಟ ಕಡೆಗಾಣದೆ ಕೆಟ್ಟು ಹೋಗಿಬರುವ ಮಿಟ್ಟೆಯ ಭಂಡರ ಎನಗೊಮ್ಮೆ ತೋರದಿರಾ ಗುರುನಿರಂಜನ ಚನ್ನಬಸವಲಿಂಗಾ.