ಲಿಂಗಸಂಬಂಧಿಗಳೆಂಬ ಭಂಗಗೇಡಿ
ಭವಿಗಳನೇನೆಂಬೆನಯ್ಯಾ?
ಲಿಂಗಸಂಬಂಧಿಗಳ ಅಂಗದಲ್ಲಿ
ಆಸೆ ಆಮಿಷ ಪ್ರಕೃತಿ ಪರಿಗಳೆಲ್ಲಿಹದೊ?
ಲಿಂಗಪ್ರಾಣಿಗಳಿಗೆ ಮನದ ಸಂಕಲ್ಪವಿಕಲ್ಪಗಳೆಲ್ಲಿಹದೊ?
ಪ್ರಾಣಲಿಂಗಿಗಳಿಗೆ ಪ್ರಾಣೇಂದ್ರಿಯ ವಿಷಯಸುಖವೆಲ್ಲಿಹದೊ?
ಗುರುನಿರಂಜನ ಚನ್ನಬಸವಲಿಂಗದಲ್ಲಿ
ಹುಸಿಡಂಭಕ ಹುಳುಕನಲ್ಲ ಪ್ರಾಣಲಿಂಗಿ.
Art
Manuscript
Music
Courtesy:
Transliteration
Liṅgasambandhigaḷemba bhaṅgagēḍi
bhavigaḷanēnembenayyā?
Liṅgasambandhigaḷa aṅgadalli
āse āmiṣa prakr̥ti parigaḷellihado?
Liṅgaprāṇigaḷige manada saṅkalpavikalpagaḷellihado?
Prāṇaliṅgigaḷige prāṇēndriya viṣayasukhavellihado?
Guruniran̄jana cannabasavaliṅgadalli
husiḍambhaka huḷukanalla prāṇaliṅgi.