ನಚ್ಚುಮಚ್ಚಿನ ಅಚ್ಚು ಬಿಚ್ಚಿ ಬೇರಿಲ್ಲದಿಪ್ಪ
ಅಚ್ಚಪ್ರಕಾಶಲಿಂಗವ ಕಂಡ ಶರಣನ ಭಾವಕ್ಕೆ
ವೇದಾಗಮಶಾಸ್ತ್ರ ತರ್ಕಾಳಿಯನರಿದಾಡುವ
ಮರ್ಕಟ ಕೂಕ ಕುಟಿಲ ವ್ಯವಹಾರಿಗಳ ಅರಿವು
ಆಶ್ಚರ್ಯವಾಗಿ ಹೋಗುವದು
ಗುರುನಿರಂಜನ ಚನ್ನಬಸವಲಿಂಗದ
ಪದಬೆಳಗನರಿಯದೆ.
Art
Manuscript
Music
Courtesy:
Transliteration
Naccumaccina accu bicci bērilladippa
accaprakāśaliṅgava kaṇḍa śaraṇana bhāvakke
vēdāgamaśāstra tarkāḷiyanaridāḍuva
markaṭa kūka kuṭila vyavahārigaḷa arivu
āścaryavāgi hōguvadu
guruniran̄jana cannabasavaliṅgada
padabeḷaganariyade.