Index   ವಚನ - 486    Search  
 
ಅನಂತಕೋಟಿ ಸೋಮಸೂರ್ಯಾಗ್ನಿ ಪ್ರಕಾಶವ ಕಂಡು ಮುಳುಗಿದ ಮಹಾತ್ಮನು ಖಂಡಿತ ಮಾರ್ಗದ ಕರ್ಮಕತ್ತಲೆಯ ಕನಸಿನೊಳಗರಿಯನು. ಭಿನ್ನ ನುಡಿಗಡಣಕ್ಕಿಂಬುಗೊಟ್ಟರಿವ ಮನತ್ರಯವು ಮಹದಲ್ಲೊಪ್ಪುತ್ತಿಹುದು. ಸಕಲನಿಃಕಲಸನುಮತ ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಪ್ರಾಣಲಿಂಗಿ.