ಹಂಸಪಕ್ಷಿಯ ದ್ವೈತಲಹರಿಯಿಂದೆ ಉದಯವಾದ ಹಕ್ಕಿ,
ಮೂರು ಬಣ್ಣದ ಹೆಡಿಗೆಯ ಹೊತ್ತ ನಾರಿಯ ಕೈಯೊಳು
ಮೂರುವಂಟಿಯಾಗಿ,
ಹಗಲು ಸಂಜೆಗತ್ತಲೆಯಲ್ಲಿ ತಾವೆಯಾಗಿರ್ದವು ನೋಡಾ.
ಒಂದೊಂದು ಬಾಗಿಲಲ್ಲಿ ನಿಂದು ಬಂದ ಬಂದವರ ನುಂಗುತ್ತ
ಮೊದಲು ಮಧ್ಯ ಕಡೆಯೊಳು ಕೆಡಹಿ ಮರೆದಿರ್ದಲ್ಲಿ,
ಅಡಗಿರ್ದ ಸಿಂಹ ಎದ್ದು ವಡಮುರಿದು ನುಂಗಲು
ಸಿಂಹನ ಮುಖದಲ್ಲಿ ಮೂರುಲಕ್ಷ ಸಿಂಹ ಹುಟ್ಟಿ
ಒಂದಿರುವೆಯೊಳಡಗಿರುವ
ಗುರುನಿರಂಜನ ಚನ್ನಬಸವಲಿಂಗ ತಾನೆ ಬೇರಿಲ್ಲ.