Index   ವಚನ - 528    Search  
 
ಮನವನಳಿದುಳಿದ ಮಹಾನುಭಾವಿಗಳ ವಚನವ ನೋಡಿ, ವಾಕ್ಕಿನಿಂದೆ ವಿರತಿಯ ನುಡಿದು, ಮಾನಸದಿಂದೆ ಮಲವ ಹಿಡಿದು, ಕಾಯದಿಂದೆ ಕೆಟ್ಟು ನಡೆವ ಭ್ರಷ್ಟ ಮನುಜರಿಗೆ ಇನ್ನೆಷ್ಟು ಜನ್ಮದ ಕಷ್ಟವನಳಿದು ಬರುವ ಬಟ್ಟೆಯನರಿವ ಪರಿಯಿನ್ನೆಂತೊ? ನಿಮ್ಮಾದಿಯ ಬಲ್ಲ ಅಪ್ರತಿಮಂಗಲ್ಲದೆ ಅನುಭಾವವಿಲ್ಲ ಕಾಣಾ ಗುರುನಿರಂಜನ ಚನ್ನಬಸವಲಿಂಗಾ.