Index   ವಚನ - 527    Search  
 
ಲಿಂಗಾಂಗಸಮರಸಾನುಭಾವವ ಬಲ್ಲೆನೆಂದು ನುಡಿದು ಕೊಂಬ ಖುಲ್ಲ ಕುಚೇಷ್ಠಿಗಳ ವಾಕ್ಪಟುವ ನೋಡಾ! ಕಾಯಸಂಗವರಿದಬಳಿಕ ಕರ್ಮಕ್ರಿಯಾವೇಷಧಾರಿಯಾಗಿ ಡಂಭಕನಡೆಯುಂಟೆ? ಮನಸಂಗವನರಿದಬಳಿಕ ಸೂತಕ ಪಾತಕ ಸಂಕಲ್ಪ ಸಂಶಯವೆಂಬ ಸಂಸ್ಕೃತಿಯೊಳೊಡವೆರೆಯಲುಂಟೆ? ಪ್ರಾಣಸಂಗವನರಿದಬಳಿಕ ವಾಯುಪ್ರಕೃತಿಯ ವರ್ತಕವುಂಟೆ? ಭಾವಸಂಗವನರಿದಬಳಿಕ ಮಾಯಾಮೋಹ ವಿಷಯ ಭ್ರಾಂತಿನಸುಳುಹುಂಟೆ? ಕಾಯ ಮನ ಪ್ರಾಣ ಭಾವ ಕಳೆ ಹಿಂಗದೆ ಸಂಗಭಾವಿಯೆಂದರೆ ಹಿಂಗುವದು ಗುರುನಿರಂಜನ ಚನ್ನಬಸವಲಿಂಗಾನುಭಾವ.