ಸಿಂಹದ ಹಾಲು ತಂದು ಶುನಕಂಗಿತ್ತು ಸಲಹಿದರೆ
ನಡೆ ನುಡಿಯಲ್ಲಿ ಶುನಕನಲ್ಲದೆ ಸಿಂಹನಾಗಿತ್ತೆ?
ಮಹಾನುಭಾವ ಜ್ಞಾನಗುರುವಿನ ಬೋಧಸುಧೆಯನು
ತನು ಮನ ಭಾವ ಪ್ರಕೃತಿಯುಕ್ತ ನರನಿಗಿತ್ತಡೆ
ನಡೆ ನುಡಿಯಲ್ಲಿ ಪೂರ್ವಪ್ರಕೃತಿಯುಕ್ತ ನರನಲ್ಲದೆ
ಸತ್ಕ್ರಿಯಾಜ್ಞಾನಾನುಭಾವಿಯಾದಾನೆಯೇ? ಆಗಲರಿಯನು.
ಅದು ಕಾರಣ, ಗುರುನಿರಂಜನ ಚನ್ನಬಸವಲಿಂಗಕ್ಕೆ
ಅಂಗವಾದ ಅಂಶಿಕರಿಗಲ್ಲದೆ ಆಗಬಾರದು ಕಾಣಾ.
Art
Manuscript
Music
Courtesy:
Transliteration
Sinhada hālu tandu śunakaṅgittu salahidare
naḍe nuḍiyalli śunakanallade sinhanāgitte?
Mahānubhāva jñānaguruvina bōdhasudheyanu
tanu mana bhāva prakr̥tiyukta naranigittaḍe
naḍe nuḍiyalli pūrvaprakr̥tiyukta naranallade
satkriyājñānānubhāviyādāneyē? Āgalariyanu.
Adu kāraṇa, guruniran̄jana cannabasavaliṅgakke
aṅgavāda anśikarigallade āgabāradu kāṇā.
ಸ್ಥಲ -
ಪ್ರಾಣಲಿಂಗಿಯ ಮಾಹೇಶ್ವರಸ್ಥಲ