ಸುಖ-ದುಃಖ, ಪುಣ್ಯ-ಪಾಪ, ಸ್ವರ್ಗ-ನರಕವೆಂಬ
ದ್ವಂದ್ವ ಕರ್ಮಂಗಳನು ಸಾಕ್ಷಿಕನಾಗಿ
ನೋಡುವಾತ ತಾನೆಂದರಿಯದೆ
ಮಾಡುವರೊಂದೊಂದ, ಕೇಳುವರೊಂದೊಂದ,
ನೋಡುವರೊಂದೊಂದ.
ಬೆಂದ ಒಡಲ ಬೇರಿಟ್ಟು ಬೆಳಗಿನಲ್ಲಿ ಬೆಳಗಿಂತುಕೊಂಡು
ಸುಖಮಯನಾದಾತನೇ ಪ್ರಸಾದಿ ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Sukha-duḥkha, puṇya-pāpa, svarga-narakavemba
dvandva karmaṅgaḷanu sākṣikanāgi
nōḍuvāta tānendariyade
māḍuvarondonda, kēḷuvarondonda,
nōḍuvarondonda.
Benda oḍala bēriṭṭu beḷaginalli beḷagintukoṇḍu
sukhamayanādātanē prasādi kāṇā
guruniran̄jana cannabasavaliṅgā.
ಸ್ಥಲ -
ಪ್ರಾಣಲಿಂಗಿಯ ಪ್ರಸಾದಿಸ್ಥಲ