ಅತ್ತಿತ್ತಲುಕದೆ ನಿಟ್ಟೆಲುವ ನೇವರಿಸಿ
ಮೂರೇಳು ಗ್ರಂಥಿಯ ತಟ್ಟಿಸಿ ಕುಂಡಲಿಯ
ನೆಗೆದು ಬಂಧಿಸಿದಂದಕ್ಕಿಳಿದು
ವಾತ ಪಿತ್ತ ಶ್ಲೇಷ್ಮಯೇರಿಸಿದ ರಸನೆಗಿಳಿಯೆ
ಚಿದಾಮೃತವೆಂದು ಸೇವಿಸಿ ಬಾಳಿಹೋಗುವ
ಬಯಲಭ್ರಾಂತರಿಗಿನ್ನೆಂತು ಪ್ರಾಣಲಿಂಗದ
ಪ್ರಸಾದ ಸಾಧ್ಯವಪ್ಪುದು ಹೇಳಾ
ಗುರುನಿರಂಜನ ಚನ್ನಬಸವಲಿಂಗಾ?
Art
Manuscript
Music
Courtesy:
Transliteration
Attittalukade niṭṭeluva nēvarisi
mūrēḷu granthiya taṭṭisi kuṇḍaliya
negedu bandhisidandakkiḷidu
vāta pitta ślēṣmayērisida rasanegiḷiye
cidāmr̥tavendu sēvisi bāḷihōguva
bayalabhrāntariginnentu prāṇaliṅgada
prasāda sādhyavappudu hēḷā
guruniran̄jana cannabasavaliṅgā?
ಸ್ಥಲ -
ಪ್ರಾಣಲಿಂಗಿಯ ಪ್ರಸಾದಿಸ್ಥಲ