Index   ವಚನ - 570    Search  
 
ಮನಮಾಯಾಮಥನದಿಂದುದಯವಾದ ಬೆಂಕಿ ಮೂರುಲೋಕವ ಸುಟ್ಟಿತ್ತು ನೋಡಾ. ಮೂರುಲೋಕದ ಕಿಚ್ಚು ಹರಿ ಬ್ರಹ್ಮ ಇಂದ್ರ ಚಂದ್ರಾದಿ ಸಕಲರ ನುಂಗಿ ಭಂಗಬಡಿಸಿ ಕೆಡಹಿತ್ತು ಕಾಣಾ. ಮತ್ತೆಂತೆಂದೊಡೆ, ಮನಶಕ್ತಿಮಥನದಿಂದೆ ಉದಯವಾದ ಲಿಂಗವು ಲಯಗಮನ ಸ್ಥಿತಿಯ ಸಂಹರಿಸಿ ಸತ್ಕ್ರಿಯಾಪ್ರಕಾಶ ಸುಜ್ಞಾನಪ್ರಕಾಶ ಮಹಾಜ್ಞಾನಪ್ರಕಾಶವಾಗಿ ಶರಣನ ಸರ್ವಾಂಗವ ನುಂಗಿ ಗುರುನಿರಂಜನ ಚನ್ನಬಸವಲಿಂಗವಾಗಿ ಕಾಣಿಸುತಿರ್ದಿತ್ತು ನೋಡಾ.