Index   ವಚನ - 576    Search  
 
ಅರಿವ ಮರೆದು ತಿರುಗುವ ಕುರಿಗಳಿಗಿನ್ನೆತ್ತಣ ಶರಣಪದವಯ್ಯಾ. ಬರಿಮಾತಿನಿಂ ಮೆರೆದು ಸೂತಕ ಪಾತಕದಲ್ಲಿ ಹರಿವ ಹಲವು ಕುಟಿಲಬುದ್ಧಿಯ ಮುಖವಾಗಿರುವ ದುಶ್ಚಲರಿಗೆ ನಿಶ್ಚಲ ನಿರ್ಮಾಯ ನಿರುಪಮ ಶರಣಪದವೆಂತು ಎನ್ನಬಹುದು ಗುರುನಿರಂಜನ ಚನ್ನಬಸವಲಿಂಗಾ.