Index   ವಚನ - 589    Search  
 
ಬಯಲಪುರುಷನ ನೆರೆದು ಬಯಲರೂಪಕೆ ತಂದು, ಬಯಲರೂಪಿನಲ್ಲಿರಿಸಿ ನಡೆಯಬಲ್ಲ ಶರಣ. ರೂಪ ಬಯಲಲ್ಲಿರಿಸಿ ನೋಡಬಲ್ಲ ಶರಣ. ರೂಪ ಬಯಲೆಂಬ ಕುರುಹಳಿದು ಕೂಡಬಲ್ಲ ಗುರುನಿರಂಜನ ಚನ್ನಬಸವಲಿಂಗದಲ್ಲಿ ಘನಮಹಿಮ ಶರಣ.