Index   ವಚನ - 591    Search  
 
ಸಂಸಾರಿಯ ಸಂಗಸುಖ ತಲೆಗೇರಿ ತರಹರವಾದ ನಿಸ್ಸಂಸಾರಿಯ ನಿಯತ ಆಚಾರಕ್ಕೆ, ಎಂತೆಂದೊಡೆ ಅಂತೆ ಮಾರ್ಗತಪ್ಪಿ ನಡೆವಲ್ಲಿ ಆಚಾರಹೀನನೆಂಬುದು. ವಾಕ್ ತಪ್ಪಿನಡೆವಲ್ಲಿ ವಚನಹೀನನೆಂಬುದು. ಕಣ್ಣು ಕೆಟ್ಟು ನೋಡುವಲ್ಲಿ ಹೀನದೃಷ್ಟಿಯೆಂಬುದು. ಚರ್ಮಗೆಟ್ಟು ಮಾಡಿದಲ್ಲಿ ಅಂಗಹೀನನೆಂಬುದು. ಕರ್ಣವ ಕೆಡಿಸಿಕೊಂಡಲ್ಲಿ ಕಿವಿಹೀನನೆಂಬುದು. ಮೂಗ ಮುಚ್ಚಿ ನೋಡುವಲ್ಲಿ ಮುಕರಿಯನೆಂಬುದು. ಮಾನಸಕೆಟ್ಟು ಮೌನಗೊಂಡಲ್ಲಿ ಮುಸುಕನೆಂಬುದು. ಗುರುನಿರಂಜನ ಚನ್ನಬಸವಲಿಂಗವಾದಲ್ಲಿ ನೋಡಲರಿಯದೆ ಹಿಮ್ಮೆಟ್ಟುವರು ಮೂರುಲೋಕದಲ್ಲಿದ್ದವರು.