ಅನಂತಬ್ರಹ್ಮಾಂಡ ಸಚರಾಚರ ಯಗಜುಗವನರಿದು ನಿಂದ
ನಿಶ್ಚಿಂತ ನಿಜಾನಂದನಿಲುವಿಂಗೆ,
ಸಂದುಸಂಶಯ ದ್ವಂದ್ವಕರ್ಮಕಂಡು ಕಲೆ ನಿಂದಿರಲೆಡೆಯಿಲ್ಲ.
ಅದೇನು ಕಾರಣವೆಂದೊಡೆ,
ಸೂರ್ಯಂಗಿದಿರುಕತ್ತಲೆ, ನೀರಿಂಗಿದಿರು ಬೆಂಕಿ,
ಮರುತಂಗಿದಿರು ಮೇಘ,
ಮಹಾಜ್ವಾಲೆಗಿದಿರು ಶೀತ, ಮಹದರುವಿಂಗಿದಿರು ಮಾಯೆ,
ಇನಿತಕ್ಕಿಂಬಿಲ್ಲದಂತೆ ನಿತ್ಯ ನಿತ್ಯ
ಗುರುನಿರಂಜನ ಚನ್ನಬಸವಲಿಂಗ ನಿಮ್ಮ ಶರಣ.
Art
Manuscript
Music
Courtesy:
Transliteration
Anantabrahmāṇḍa sacarācara yagajugavanaridu ninda
niścinta nijānandaniluviṅge,
sandusanśaya dvandvakarmakaṇḍu kale nindiraleḍeyilla.
Adēnu kāraṇavendoḍe,
sūryaṅgidirukattale, nīriṅgidiru beṅki,
marutaṅgidiru mēgha,
mahājvālegidiru śīta, mahadaruviṅgidiru māye,
initakkimbilladante nitya nitya
guruniran̄jana cannabasavaliṅga nim'ma śaraṇa.