Index   ವಚನ - 597    Search  
 
ಸತ್ತುಚಿತ್ತಾನಂದ ನಿತ್ಯಪರಿಪೂರ್ಣ ನಿಜಾನಂದ ಶರಣ, ಇತರ ಭಜನೆ ಭಾವನೆ ಗಜಬಜೆಗಂಗೈಸುವ ರಜನೆ ಮಲಸಂಯುಕ್ತ ಕುಜನ ಕುಲಾದಿ ಮದ ದುಃಸುಖಿಯಲ್ಲ ನೋಡಾ. ನಾದ ಬಿಂದು ಕಳೆಯ ತಪ್ಪಿಸಿ ಗುರುಚರಲಿಂಗವನಪ್ಪಿ ಕುರುಹಿಲ್ಲದ ನಿಲುವು ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.