Index   ವಚನ - 603    Search  
 
ನಿತ್ಯಾನಂದ ನಿರ್ಮಲ ಜ್ಯೋತಿರ್ಮಯಲಿಂಗಸುಖಿ ಶರಣಂಗೆ, ಅವಿದ್ಯಾಮಾಯಾಮಲದುಸ್ಸಂಸಾರ- ದಾಯಾಸದೋರಲು ಕಾರಣವೇನು, ಇದು ಸಂಗತಿಯೊಳಿರ್ದು ನಾವು ಲಿಂಗ ನಮಗೆ ಪಾಶವಿಲ್ಲೆಂದು ತನುಮನಭಾವವ ಮೀರಿರ್ದ ಮಹಿಮರೆಂದು ಬೊಗಳಿ ಬಿದ್ದು ಹೋಗುವ ವಾಗದ್ವೈತಿ ಭಂಡಮೂಢರ ಶರಣರೆಂದರೆ ಅಘೋರನರಕ ತಪ್ಪದು ನೋಡಾ ಗುರುನಿರಂಜನ ಚನ್ನಬಸವಲಿಂಗಾ.