ಮಾತು ಮಾತಿನ ತೂತಜ್ಞಾನಿಗಳಿಗೆತ್ತಣ ಶರಣಸ್ಥಲವಯ್ಯಾ?
ಸೋತು ನಡೆಯರು ಗುರುಹಿರಿಯರಿಗೆ
ಖ್ಯಾತಿಯ ಮುಂದಿಟ್ಟು ಮಲತ್ರಯದಾಸೆಯೊಳು ಮುಳುಗಿ.
ಇತರರ್ಗೆ ನೀತಿ ನೂತನದಿಂದೆ ಜರಿದು
ತನ್ನನರಿಯದೆ ಭಿನ್ನವಿಟ್ಟು ಮನಗೂಡಿ ಚರಿಸುವ
ಶುನಕರು ಶರಣರೆಂದರೆ ಸರಿಯಪ್ಪುದೆ?
ನಾಚಿಕೆಯಿಲ್ಲದ ನಾಡಭೂತಗಳನೆನಗೊಮ್ಮೆ ತೋರದಿರಯ್ಯಾ
ನಿಮ್ಮ ಧರ್ಮ ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Mātu mātina tūtajñānigaḷigettaṇa śaraṇasthalavayyā?
Sōtu naḍeyaru guruhiriyarige
khyātiya mundiṭṭu malatrayadāseyoḷu muḷugi.
Itararge nīti nūtanadinde jaridu
tannanariyade bhinnaviṭṭu managūḍi carisuva
śunakaru śaraṇarendare sariyappude?
Nācikeyillada nāḍabhūtagaḷanenagom'me tōradirayyā
nim'ma dharma guruniran̄jana cannabasavaliṅgā.