Index   ವಚನ - 611    Search  
 
ಅಯ್ಯಾ, ಅನಾದಿ ಪರಶಿವ ತನ್ನ ವಿನೋದಕಾರಣ ಮರ್ತ್ಯಲೋಕದ ಮಹಾಗಣಂಗಳ ನೋಡಲೋಸುಗ ನಾದಬಿಂದುಕಳಾಮೂರ್ತಿಯಾಗಿ ಸತ್ಯವೆಂಬ ಕಂತೆಯ ಧರಿಸಿ, ಸಮತೆಯೆಂಬ ಕಮಂಡಲವ ಪಿಡಿದು, ನಿರ್ಮಲವೆಂಬ ಟೊಪ್ಪರವ ಧರಿಸಿ, ನಿಜದರುವೆಂಬ ದಂಡವ ತಳೆದು, ಮಹಾಜ್ಞಾನವೆಂಬ ಭಸ್ಮವ ಧರಿಸಿ, ಘನಭಕ್ತಿ ವೈರಾಗ್ಯವೆಂಬ ಹಾವುಗೆಯ ಮೆಟ್ಟಿ, ಸದ್ಭಾವವೆಂಬ ಹಸ್ತದಲ್ಲಿ ಪರಮಾನಂದವೆಂಬ ಪಾವಡವ ಕಟ್ಟಿ, ಭಕ್ತದೇಹಿಯೆಂದು ಸಜ್ಜನ ಸದುಹೃದಯ ಶಾಂತರುಗಳನರಸುತ್ತ ತಾಮಸವ ಪರಿಸುತ್ತ ಅಡಿಗೆರಗಿ ಬಂದವರಿಗನುಭಾವವ ತಿಳಿಸುತ್ತ ಸುಪವಿತ್ರಕ್ಕಿಳಿಸುತ್ತ ಸುಜ್ಞಾನವೆರಸಿ ತನ್ನಂತೆ ಮಾಡುತ್ತ ಚರಿಸುತಿರ್ದ ಗುರುನಿರಂಜನ ಚನ್ನಬಸವಲಿಂಗ ಭಕ್ತೋಪಕಾರವಾಗಿ.