Index   ವಚನ - 610    Search  
 
ಕಾಯದಲ್ಲಿ ಕರುಣರಸವಿರಹಿತನಲ್ಲ ಕಾಣಾ. ಮನದಲ್ಲಿ ಪ್ರೇಮರಸ ಶೂನ್ಯನಲ್ಲ ಕಾಣಾ. ಪ್ರಾಣದಲ್ಲಿ ಅಭಿನ್ನಮೋಹರಸರಹಿತನಲ್ಲ ಕಾಣಾ. ಭಾವದಲ್ಲಿ ಅಖಂಡಪರಿಪೂರ್ಣರಸವಿರಹಿತನಲ್ಲ ಕಾಣಾ. ಅರುವಿನಲ್ಲಿ ಘನಸಮರಸ ನಾಶನಲ್ಲ ಕಾಣಾ. ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಗಣತತಿಗೆ ಅಜರುಗಳ ಸ್ಥಾನದಂತಲ್ಲ ಕಾಣಾ ಲಿಂಗಶರಣ.