ಅರಿದು ಮರೆದವನಲ್ಲ, ಮರೆದು ಅರಿದವನಲ್ಲ,
ಅರಿವು ಮರೆವು ಹಿಡಿದು ಚರಿಸಿದವನಲ್ಲ,
ಗಗನ ಧರೆಹಿರಿಯರ ನೆರವಿಯವನಲ್ಲ.
ಪರಮ ಪರಿಣಾಮಿ ನಿರಂತರ
ಗುರುನಿರಂಜನ ಚನ್ನಬಸವಲಿಂಗಾ ನಿಮ್ಮ ಶರಣ.
Art
Manuscript
Music
Courtesy:
Transliteration
Aridu maredavanalla, maredu aridavanalla,
arivu marevu hiḍidu carisidavanalla,
gagana dharehiriyara neraviyavanalla.
Parama pariṇāmi nirantara
guruniran̄jana cannabasavaliṅgā nim'ma śaraṇa.