Index   ವಚನ - 625    Search  
 
ಲಿಂಗವೇ ತಾನಾದ ಶರಣ ತಾನೊಂದು ಕಾಯನಾಗಿ ಲಿಂಗವ ಭಿನ್ನವಿಟ್ಟು ಅಷ್ಟವಿಧಾರ್ಚನೆ ಷೋಡಶೋಪಚಾರವೆಂಬ ಸಂಸಾರ ಗುಂಜಿನಲ್ಲಿ ತೊಡಕಿ ಬಳಲುವನಲ್ಲ. ಎಂತಿರ್ದಂತೆ ಪೂಜೆ ನಿತ್ಯ ಪರಿಪೂರ್ಣಪರಿಣಾಮಿ ಗುರುನಿರಂಜನ ಚನ್ನಬಸವಲಿಂಗ ತಾನೆ ಕಾಣಾ.