ಲಿಂಗಾಚಾರ ಭೃತ್ಯಾಚಾರ ಶಿವಾಚಾರ ಗಣಾಚಾರ
ಸದಾಚಾರ ಕ್ರಿಯಾಚಾರ ಜ್ಞಾನಾಚಾರ ಭಾವಾಚಾರ
ಸತ್ಯಾಚಾರ ನಿತ್ಯಾಚಾರ ಧರ್ಮಾಚಾರ ಸರ್ವಾಚಾರಸಂಪತ್ತೆಂಬ
ಪ್ರಸಾದಲಿಂಗಸನ್ನಿಹಿತ ಶರಣಂಗೆ
ವ್ರತ ನಿಯಮ ಛಲಾದಿ ಮಿಥ್ಯಾಚಾರವೇನೂ ಪ್ರಯೋಜನವಲ್ಲ ಕಾಣಾ.
ಇದನರಿಯದೆ ಹಾದಿ ಬೀದಿಯ ಸಾಧಕರ ಮಾತಕೇಳಿ
ಖಂಡಿತಕ್ರಿಯೆಯಿಂದ ಕಷ್ಟಬಡುತ ಅಖಂಡಮಯ ಲಿಂಗ
ತಾನೆಂಬ ಭಾವವಳಿದು
ನೀನು ನಾನೆಂದು ಬೆಂದು ಭವಗಂಡರು ಕಾಣಾ
ಗುರುನಿರಂಜನ ಚನ್ನಬಸವಲಿಂಗಾ.
Art
Manuscript
Music
Courtesy:
Transliteration
Liṅgācāra bhr̥tyācāra śivācāra gaṇācāra
sadācāra kriyācāra jñānācāra bhāvācāra
satyācāra nityācāra dharmācāra sarvācārasampattemba
prasādaliṅgasannihita śaraṇaṅge
vrata niyama chalādi mithyācāravēnū prayōjanavalla kāṇā.
Idanariyade hādi bīdiya sādhakara mātakēḷi
khaṇḍitakriyeyinda kaṣṭabaḍuta akhaṇḍamaya liṅga
tānemba bhāvavaḷidu
nīnu nānendu bendu bhavagaṇḍaru kāṇā
guruniran̄jana cannabasavaliṅgā.